ವರ್ಷಧಾರೆ


ಸುರಿದು, ಹರಿದು, ಜರಿದು ಬಂದು
ಬಾನ ಎಲ್ಲೇ ದಾಟಿ ಇಳಿವ
ಸೋನೆ ಮಳೆಯು ನಲಿವ ಚಂದ
ನೋಡೋ ಮನಕೆ ಹರ್ಷ ಹೊನಲು.

ಭೂಮಿ ತೊಯ್ದು ಮಿಂದ ಹಾಗೆ
ಹಸಿರ ಸೀರೆ ಉಟ್ಟ ಹಾಗೆ
ಶುಬ್ರ ಗಾಳಿ ಬೀಸುತಿರಲು 
ದಣಿವು ಬೇಗೆ ಎಲ್ಲಿಹುದು?

ಈಶ ನಿನ್ನ ಶೃಷ್ಟಿ ಚೆನ್ನ
ಪೃಥ್ವಿ ಮನೆಯ ಅಂದ ಚೆನ್ನ
ನಿಂತು ನೋದುತಿರಲು ಎನಗೆ
ವರ್ಷಧಾರೆ ಹಬ್ಬದಂತೆ.




 

Comments

Popular posts from this blog

Life is a circus

Happy to be creative

The feeling of being left out