ಮನಸ್ಸಿನ ಅಂಗಳದಲಿ.......

ಮನಸ್ಸಿನ  ಅಂಗಳದಲಿ ನೂರಾರು ನೆನಪಿನ ವಾಸಾ, ನೂರಾರು ಕನಸ್ಸಿನ ಸುಗಂಧ. ಮುಂಜಾನೆ ಮಸುಕಿನಲಿ ಎದ್ದು, ಗುಡಿಸಿ, ಸಾರಿಸಿ, ನೀರೆರೆದು ರಂಗೋಲಿ ಹಾಕಿದಂತೆ, ಉಲ್ಲಾಸದ ಅನುಭವ. ನಸುಗೆಂಪು ಸೂರ್ಯ ಜಗತ್ತಿನ ಕತ್ತಲೆ ಓಡಿಸುವಂತೆ ಸುಯೋಚನೆಗಳು ಮನ್ನಕ್ಕೆ   ಪ್ರವೇಶಿಸಿ ಪ್ರಕಾಶ ಮೂಡಿದಂತೆ. ಮನೆಗೆ ಬಂದ ಅತಿಥಿಯನ್ನು ಆದರದ ಸ್ವಾಗತ ನೀಡಿ, ಸಂತಸದಿಂದ ಬರಮಾದಿಕೊಂದಂತೆ ಇರಬೇಕು ನಮ್ಮ ಮನ. ಸದಾ ತೆರೆದು, ಸದಾ ನಗುತ್ತ, ಸದಾ ಹೊಸ ವಿಚಾರಗಳನ್ನು  ಸ್ವಾಗತಿಸುವ ಮನದ ಬಯಕೆ ಇರಲಿ. ಒಳಿತು ಕೆಡಕುಗಳ ನಡುವಿನ ವ್ಯತ್ಯಾಸ  ತಿಳಿದು ನಿರ್ಧಾರಗಳನ್ನು ಮಾಡುವ ತಾಳ್ಮೆ, ವಿವೇಕವನ್ನು ಪಡೆಯುವ ಮನಸ್ಸಿನ ಸಾಮರತ್ಯ  ಬರಲಿ. ದಿನ ಕಳೆದು, ರಾತ್ರಿಯಾದಾಗ ಮಲಗುವ ವೇಳೆಯಲಿ ನೆಮ್ಮದಿ, ನಿದ್ದರೆ ಬಂದರೆ ನಾವು ಮನಸ್ಸಿನ ಹಿಡಿತದಲ್ಲಿದೇವೋ, ಮನಸ್ಸು ನಮ್ಮ ಹಿಡಿತದಲ್ಲಿ ಇದೆಯೋ ಗೊತ್ತಾಗುವುದು.


Comments

Popular posts from this blog

ज़िन्दगी, तेरे नाम

Laughing Buddha

Mind Block