ಕನಸ್ಸಿನ ರೆಕ್ಕೆಯನ್ನೇರಿ

ಕನಸ್ಸಿನ ರೆಕ್ಕೆಯನ್ನೇರಿ
ಹಾರುತ್ತಿರುವ ನನಗೆ
ನಿನ್ನ ಪ್ರೀತಿಯ ದಿಕ್ಕೇ ಕಾಣಬೇಕಿತ್ತು.
ಮನಸ್ಸಿನ ಕತ್ತಲಲ್ಲಿ ಬೆಳಕಾದ ನಿನ್ನನ್ನು
ನನ್ನ ದಾರಿದೀಪವಾಗಿ ಮಾಡಿದವರಾರು?
ವಿಧಿಯಲ್ಲಿ ನಂಬಿಕೆ ಇಲ್ಲ ನನಗೆ,
ರೇಖೆಗಳನ್ನು ಓದಲು ನನಗೆ ಬಾರದು.
ಇವೆಲ್ಲವನ್ನೂ ಮೀರಿ ಒಂದು ಸೂತ್ರವಿಹುದೇನೋ,
ನಮ್ಮಿಬ್ಬರನ್ನು ಒಂದು ಮಾಡಿಹುದು.

 

Comments

Popular posts from this blog

Life is a circus

Happy to be creative

Chasing a dream......