ಬಿಸಿಲುಕುದುರೆ
ಜಾರಿ ಹೋಗುತಿರುವ ದಿನಗಳು, ಕಳೆದು ಹೋಗುತಿರುವ ಜೀವನ, ಓಡಿ ಹೋಗುತಿರುವ ಕ್ಷಣಗಳು. ನೋಡು ನೋಡುತಿದ್ದಂತೆ ಕಣ್ಣು ಮುಂದೆಯೇ ಬದುಕು ಕುದುರೆಯನ್ನೇರಿ ವೇಗವಾಗಿ ಹೋಗುತ್ತಿದೆ. ಅದರ ಜೊತೆ ನಾನೂ ಹೆಜ್ಜೆಗೆ ಹೆಜ್ಜೆ ಸೇರಿಸ ಬೇಕು ಅಂದರೆ ಏನೋ ನನ್ನನು ತಡೆದು ಹಿಡಿದಂತೆ. ಮುಂದೆ ಹೋಗಲಾರದೆ, ಹಿಂದೆಯೂ ತಿರುಗಲಾರದಂತೆ ಪರಿಸ್ಥಿತಿ. ಎಲ್ಲ ಇದ್ದು ಏನೋ ಕೊರತೆ. ಯಾವುದನ್ನೋ ಹುಡುಕ್ಕುತಿರುವ ತವಕ, ಬಯಸುತ್ತಿರುವ ಹಂಬಲ. ಬಹುಷಃ, ಇದನ್ನೇ ಗ್ನ್ಯಾನಿಗಳು ಜೀವನೋದ್ದೇಶ ಅನ್ನುತಿದ್ದರೇನೋ. ನಮ್ಮ ಬದುಕಿನ ಸಾರ್ಥಕತೆ ಕಂಡುಕೊಳ್ಳುವುದು ನಮ್ಮ ಜವಾಬ್ದಾರಿ. ಕಲವರು ಜೀವನವೇ ಪಯಣಾ ಅಂದರೆ, ಕೆಲವರು ಪಯಣವೆ ಜೀವನ ಅನ್ನುವರು. ಕಯ್ಯಿ ಚಾಚಿ ಕಳೆದು ಹೋದುದನು ಬಾಚಿಕೊಳ್ಳಲು ಹೋದರೆ ಒಂದು ಹಿಡಿ ಜೀವನವೂ ದೊರಕದು. ಅಂದುಕೊಂಡರೆ ಎಲ್ಲವೂ ಇದೆ, ಇಲ್ಲದಿದ್ದರೆ ಏನೂ ಇಲ್ಲ. ಇರುವ ಮತ್ತು ಇಲ್ಲದಿರುವ ನಡುವೆಯ ತುಮುಲವೇ ಬದುಕು. ನನ್ನೊಳಗಿನ ಬರಡು ಭೂಮಿಯನ್ನು ಹಸಿರಾಗಿ ಮಾಡುವ ರೀತಿಯನ್ನು ನಾನು ಹುಡುಕಬೇಕಿದೆ. ನಡೆಯುವ ದಾರಿ ಎಷ್ಟು ಮುಖ್ಯವೋ, ಹೊಗ್ಗುತಿರುವ ದಿಕ್ಕು ಹಾಗು ಪಯಣದ ಉದ್ದೇಶವೂ ಅಷ್ಟೇ ಮುಖ್ಯ. ಆದಷ್ಟು ಬೇಗ ಈ ದಾರಿ, ಉದ್ದೇಶ ಮತ್ತು ದಿಕ್ಕನ್ನು ನಾ ಪಡೆಯುವಂತೆ ಆಗಲಿ ಎಂದು ಬಯಸುತ್ತೇನೆ.