ನಡೆದು ಬಂದ ಹಾದಿ
ರಾತ್ರಿ ಪಯಣ ಮಾಡಲೆಂದು ದೀಪ ಹಿಡಿದು ನಿಂತಿಹೆ, ದಾರಿ ಕಾಣದೆಂದು ಭಯವೇಕೆ? ಮನಸ್ಸು ಮಾಡಿ ಹೆಜ್ಜೆ ಇಟ್ಟ ಗಳಿಗೆಯೇ ಶುಭ ಗಳಿಗೆ. ಮುಂದೆ ಸಾಗಬೇಕು ಇನ್ನೂ, ಮೇಲು, ಕೆಳಗೆ, ತಿರುವು, ಮುರುವು, ಏನೇ ಬರಲಿ ಸೈ ಎಂದು ಹೊರಟು ನಿಂತ ನನಗೆ ಯಾವ ಅಳುಕು, ಯಾವ ಚಿಂತೆ? ಬರುವ ಮುನ್ನ ಸೂಚನೆ ಕೊಡುವ ಮರ್ಮ ಮರ್ಮವೇ ? ಅಳುವ ಮುನ್ನ ಭಾವನೆ ಇರದೆ ಇರುವುದು ಸಾಧ್ಯವೇ ? ಬಾಳ ಹಾದಿ ಉದ್ದಕ್ಕೂ ಹೂವ ಹಾಸು ಬಯಸಲು ನನ್ನ ಜೀವನ ಕನಸಲ್ಲ ಭ್ರಮೆ ಪಡುವಂತಹ ನನ್ನ ಮನಸಲ್ಲ.